ಚರಿತ್ರಹೀನ ಚಿತ್ರದ "ದಿಲ ಸೆ ದಿಲ ಮಿಲನೇ ಕಾ ಕೊಯಿ ಕಾರಣ ಹೋಗಾ " ಹಾಡಿನ ಸಂಪೂರ್ಣ ಅನುವಾದ

ಈ ಹಾಡಿನ ಕೆಲವೇ ಸಾಲುಗಳನ್ನು ನಾನು ಅನುವಾದ ಮಾಡಿ ಬಹುಶಃ 80ನೇ ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದರ ಸಂಪೂರ್ಣ ಅನುವಾದ ಮಾಡಿದ್ದೇನೆ. ಅದು ಇಲ್ಲಿದೆ.

ಎರಡು ಹೃದಯ ಸೇರಲು ಏನೋ ಕಾರಣ ಬೇಕು

ಏನೂ ಕಾರಣವಿಲ್ಲದೆ ಇಲ್ಲಿ ಏನೂ ಆಗೋದಿಲ್ಲ ||

ನೋಡಿದ್ರೆ ಹಂಗೆ ನಮಗೆ ಏನೂ ಪರಿಚಯ ಇಲ್ಲ

ನೋಡೋರು ಹೇಳ್ಭೋದು ನಾವು ಹಳೆಯ ಪ್ರೇಮಿ

ಏನೋ ಇದೆ ನನ್ನಲ್ಲೂ ಮತ್ತು ನಿನ್ನಲ್ಲೂ

ಇಲ್ದಿದ್ರೆ ಇರತಿತ್ತೇ ಈ ಹೊತ್ತು

ಈ ಹೂ ಮಳೆಯು ಹೀಗೆ||

ಪ್ರೇಮ ಇದೆಯೋ ಇಲ್ಲವೋ ನಮ್ಮಲ್ಲಿ

ಎಂಬ ಬಗ್ಗೆ ಯಾವ ಸಂದೇಹವಿಲ್ಲ

ಅರೇ ಎರಡೇ ಭೇಟಿಯಲ್ಲಿ

ಈ ಕಣ್ಣು ನಿದ್ದೆ ಮಾಡದಾದವು

ಹೋ ಹೀಗೆ ಹಗಲು ಹೋಗವು

ಹೀಗೆ ರಾತ್ರಿ ಕಳೆಯವು

ಕಣ್ಣಿಗೆ ನಿದ್ದೆ ಬಾರದಾಯಿತು||

ಅರಿಯೆ ಎಲ್ಲಿಂದ ಬಂದೆ ನೀನು

ಅರಿಯೆ ಎಲ್ಲಿಂದ ಬಂದೆ ನಾನು

ಅರಿಯೆ ನೀನು ಅರಿಯೆ ನಾನು

ಹೇಗೆ ಕಲೆತವು ನಮ್ಮ ಹೃದಯ

ಬಹುಶಃ ನಮ್ಮಿಬ್ಬರದು

ಒಂದೇ ಬಾಳ ಹಾದಿ ಇರ್ಬೋದು

ಇಲ್ದಿದ್ರೆ ನಮ್ಮ ಭೇಟಿ ಹೀಗೆ ಆಗುತ್ತಿತ್ತೇ?

||